ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ – ಈ ಸಂಫವು ಸುಮೂರು 50 ವರ್ಷಗಳ ಇತಿಹಾಸ ಹೊಂದಿರುವ ಈ ಸಹಕಾರ ಸಂಘವು 1964ನೇ ವರ್ಷದಲ್ಲಿ ನೋಂದಣಿ ಸಂಖ್ಯೆ:1998 ಆರ್.ಸಿ.ಎಸ್. 1964 ರ ಮೇರೆಗೆ ನೊಂದಾಯಿಸಲ್ಪಟ್ಟು, ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ. ಈ ಸಂಫವು ಸದಸ್ಯರ ಒಳತಿಗಾಗಿ ಸತತವಾಗಿ ದುಡಿಯುತ್ತಿದೆ. ಸದಸ್ಯರ ಠೇವಣಿಗೆ ಹೆಚ್ಚಿನ ಲಾಭವನ್ನು ನೀಡುತ್ತ, ಸದಸ್ಯರ ಅಗತ್ಯ ಸಮಯದಲ್ಲಿ ಸಾಲ ಒದಗಿಸಿ ಅವರಿಗೆ ಆರ್ಥಿಕ ನೇರವು ನೀಡುತ್ತ ಪ್ರಗತಿ ಪಥದಲ್ಲಿ ನಡೆಯುತ್ತಿದೆ. ಸದ್ಯರ ಒಳತಿಗಾಗಿ ಮತ್ತಷ್ಟು ಹೊಸ ಯೋಜನೆಗಳನ್ನು ಪ್ರರಂಭಿಸುವ ಹಾದಿಯಲ್ಲಿದೆ.
ಆಧುನಿಕ ಯುಗದಲ್ಲಿ ಕಛೇರಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಕಛೇರಿಗಳನ್ನು ಆಧುನಿಕರಣಗೊಳಿಸುವುದು ಅತ್ಯವಶ್ಯವಾಗಿದೆ. ಸಂಘದ ಕಛೇರಿಯನ್ನೂ ಸಹ ಆಧುನೀಕರಣಗೊಳಿಸಿ, ಶೀಘ್ರವಾಗಿ ಕಛೇರಿ ಕೆಲಸಗಳು ಸುಸೂತ್ರವಾಗಿ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ, ಅಂತರ್ಜಾಲ ಸಂಪರ್ಕದ ಮೂಲಕ ಸಾಲ ಮುರಿಕೆ ತ:ಖ್ತೆಯನ್ನು ಸಂಬಂಧಿಸಿದ ಭೂ.ಸ.ನಿ, ಕಛೇರಿಯ ತಪಾಸಕರ ಇ ಮೇಲ್‌ಗೆ ಕಳುಹಿಸಲಾಗುತ್ತಿದೆ. ಇದರಿಂದ ಕಛೇರಿಗಳಿಂದ ಶೀಘ್ರವಾಗಿ ಸಾಲವಸೂಲಾತಿಗೆ ಸಾಧ್ಯವಾಗಲಿದೆ.